
T.S. Sundar, an 81-year-old Bengalurian artist, has spent 45 years crafting over 40,000 unique seed and thorn artifacts, mostly birds, without seeking fame. As Bengaluru evolved into India's Silicon Valley, the green city Sundar once knew faded away. This film captures the lost biodiversity of a transforming city through his eyes. Sundar's grandfather, Dr. Anbu Pillai, was one of the early doctors in Bengaluru and was praised for his brave act of saving hundreds of people in a train accident (Tanjore-Mysore). He was awarded by the Mysore King for his service. Some of the family members of T.S. Sundar played key roles in the early days of ESIC, Victoria Hospital, and Hosmat Hospital. They were also part of the Bangalore Cricketeers, which was a launching pad for many international cricket players, including E.A.S. Prasanna, Gundappa Vishwanath, and many others.
82 ವರ್ಷದ ಟಿ.ಎಸ್.ಸುಂದರ್ ಬೆಂಗಳೂರಿನ ಬಸವನಗುಡಿಯಲ್ಲಿನ 70 ಸದಸ್ಯರಿದ್ದ ಕುಟುಂಬದಲ್ಲಿ ಬೆಳೆದವರು. ಅವರು ನೋಡಿದ ಬೆಂಗಳೂರು ಇಂದಿನ ಬೆಂಗಳೂರಿನ ಪಳೆಯುಳಕೆಯಂತೆ ಭಾಸವಾಗುತ್ತದೆ. ಮದುವೆಯಾಗದೇ ಉಳಿದುಕೊಂಡ ಸುಂದರ್ ತಾತಾ, ತಮ್ಮ ಹವ್ಯಾಸಕ್ಕಾಗಿ ಬೆಂಗಳೂರಿನ ಸುತ್ತ ಸಿಗುತಿದ್ದ ಬಗೆಬಗೆಯ ಬೀಜ, ಮುಳ್ಳುಗಳಿಂದ ವಿಶಿಷ್ಠ ಕಲೆಯೊಂದನ್ನು ರೂಢಿಸಿಕೊಂಡಿದ್ದಾರೆ. ಅವರ ಕಣ್ಣಿಗೆ ಕಂಡಿದ್ದೆಲ್ಲ ಅವರದೇ ಕಲ್ಪನೆಯಲ್ಲಿ ಕಲೆಯಾಗಿ ಹೊಮ್ಮುತ್ತದೆ. ಅವರು ಕಂಡ ಹಸಿರುಳ್ಳ, ನೀರು ಅಗಾಧವಾಗಿದ್ದ ಬೆಂಗಳೂರಿನ ಪ್ರದೇಶಗಳಿಗೆ ಅವರೊಂದಿಗೆ ಹೆಜ್ಜೆಹಾಕಿದ ಫಲವೇ ಈ ಸಾಕ್ಷ್ಯಚಿತ್ರ